ಒಡಲಾಳದ ತಳಮಳ
Rs 76.00
Author:
ಕೇಶವ ಕುಡ್ಲ
ISBN No:
AAKOT03
Amount:
95 List Price: Rs 95.00
Publications:
ಆಕೃತಿ ಪುಸ್ತಕ Price: Rs 76.00
ಒಡಲಾಳದ ತಳಮಳ ಮುನ್ನುಡಿಯಿಂದ
ಜಾಗತೀಕರಣ ಪ್ರಭಲವಾಗಿ ಜಾರಿಯಲ್ಲಿರುವ ನಮ್ಮ ಸಮಾಜದಲ್ಲಿ ಲೋಕದ ಚಹರೆ ಬದಲಾಗಿ ಹೋಗಿದೆ. ಎಲ್ಲ ಬಗ್ಗೆಯ ಸಂಬಂಧಗಳು ವ್ಯಾಪಾರೀಕಣಗೊಂಡಿದೆ. ಮನುಷ್ಯ ಈ ವ್ಯಾಪಾರೀಕರಣದ ಸಂವಿಧಾನದ ಒಳಗೆ ಬದುಕುವ ಹಂತ ತಲುಪಿದ್ದಾನೆ. ತನಗೊಂದು ಮುಖವಿದೆ ಎಂಬುವ ಅರಿವು ತನಗಿದ್ದರೂ ಅದನ್ನು ಹಿನ್ನೆಲೆಗೆ ಮುಚ್ಚಿಟ್ಟು ಬದುಕುವ ಸ್ಥಿತಿಗೆ ತಲುಪಿದ್ದಾನೆ. ಚಹರೆ ಬದಲಿಸಿಕೊಂಡೇ ಬದುಕುವುದು ಮಾತ್ರ ಉಳಿದಿದೆಯೋ ಏನೋ. ನೈತಿಕತೆ, ಮೌಲ್ಯಗಳು ತಮ್ಮ ಚಹರೆಗಳನ್ನು ಹಾಗೇ ಉಳಿಸಿಕೊಂಡಿವೆಯೋ, ಬದಲಾಗಿವೆಯೋ ವ್ಯಾಖ್ಯಾನಿಸುವುದು ಕಷ್ಟ. ಈ ಕತೆಯಲ್ಲಿ ಈ ಹೊತ್ತಿನ ಜಾಗತೀಕರಣದ ಸಂದರ್ಭದಲ್ಲಿ ಮನುಷ್ಯನ ಸ್ಥಾನಮಾನಗಳ ಪ್ರಶ್ನೆ, ಅಸ್ತಿತ್ವಕ್ಕಾಗಿ ನಡೆಸುತ್ತಿರುವ ಹೋರಾಟದ ತೀವ್ರ ಚಿತ್ರಣವಿದೆ. ಜಾಗತೀಕರಣ ಅದರ ತಾತ್ವಿಕ ಸ್ವರೂಪದಲ್ಲಿ ಕಾಣುವ ವ್ಯಾಪಾರಿ ಕ್ರೌರ್ಯ, ಈ ಕ್ರೌರ್ಯಕ್ಕೆ ಬಲಿಯಾಗುತ್ತಿರುವ ಹೊಸ ತಲೆಮಾರು, ’ಪವಿತ್ರ’ ವೃತ್ತಿಯಾದ ದೇವರ ಪೂಜಾರಿ ಒಂದುಕಡೆ, ಖಾಸಗೀ ಪ್ರವಾಸೋದ್ಯಮ ಒಂದು ವ್ಯಾಪಾರದ ಸಂಸ್ಥೆಯಾಗಿ ಅದರಲ್ಲಿ ಉದ್ಯೋಗಿಯಾಗಿ ಸೇರಿಕೊಂಡ ಪುರೋಹಿತನ ಮಗ ನೀಲಲೋಹಿತ ಇನ್ನೊಂದು ಕಡೆ. ವಿದೇಶದಿಂದ ಪ್ರವಾಸಕ್ಕೆ ಬರುವ ಗಿರಾಕಿಗಳನ್ನು ತೃಪ್ತಿಪಡಿಸುವುದು ಖಾಸಗೀ ಪ್ರವಾಸೋದ್ಯಮ ಸಂಸ್ಥೆಯ ಗುರಿ. ಇಲ್ಲಿ ಕೆಲಸಕ್ಕಿರುವ ನೀಲಲೋಹಿತ ಗಿರಾಕಿಗಳಿಗೆ ತನ್ನ ಶರೀರವನ್ನು ಒಪ್ಪಿಸಿ ತೃಪ್ತಿಪಡಿಸುವ ವೃತ್ತಿಯಲ್ಲಿ ಹಣ ಸಂಪಾದಿಸಬಹುದು. ಆದರೆ ಈ ’ಅಪವಿತ್ರ’ ವೃತ್ತಿಯನ್ನು ನೆನೆದು ತನ್ನ ಪಾಡನ್ನು ಒರೆಗೆ ಹಚ್ಚಿಕೊಳುವ ಸಂಘರ್ಷವನ್ನು ಈ ಕತೆ ಸಮರ್ಥವಾಗಿ ನಿಭಾಯಿಸಿದೆ. ಪುರೋಹಿತ ತಂದೆಯ ಪವಿತ್ರ ವೃತ್ತಿಯನ್ನು ನೆನೆಯುತ್ತ, ತನ್ನ ಅಪವಿತ್ರ ವೃತ್ತಿಯನ್ನು ಮುಂದಿಟ್ಟುಕೊಂಡ ನೀಲಲೋಹಿತ ಮತ್ತು ಹಣಗಳಿಸುವ ಹೊಸ ಬಗೆಯ ಸಂಸ್ಥೆಗಳು ಈ ಸಮಾಜದಲ್ಲಿ ಹುಟ್ಟಿಕೊಂಡಿರುವುದನ್ನು ಈ ಕತೆ ಸಮರ್ಥವಾಗಿ ತೆರೆದಿಟ್ಟಿದೆ. ಕೇಶವ ಕುಡ್ಲ ಈ ಬಗೆಯ ಉತ್ತಮ ಕತೆಗಳನ್ನು ಬರೆಯುವ ಸಾಹಸ ಮಾಡಲೆಂದು ಆಶಿಸುತ್ತೇನೆ.
ಅಮರೇಶ ನುಗಡೋಣಿ.



110
